Monday, March 13, 2006

ನೆನಪುಗಳು - ಹಳೆಯದೊಂದು ಕವನ

Blog update ಮಾಡಿ ಬಹಳ ದಿನಗಳಾದವು. ಜೊತೆಗೆ ಬರೆಯಲೂ ಸಮಯ ಸಿಗುತ್ತಿಲ್ಲ. ಹಾಗಾಗಿ ನಾನು ಬಹಳ ಹಿಂದೆ ಬರೆದಿದ್ದ ಒಂದು ಕವನವನ್ನು post ಮಾಡುತ್ತಿದ್ದೇನೆ
--
ನೆನಪುಗಳು
ಎಲ್ಲಿ ಹೋದಿರಿ ಅಂದಿನ ದಿನಗಳೆ ನೆನಪುಗಳನು ಬಿತ್ತಿ,
ಮನದಲಿ ಸವಿ ನೆನಪುಗಳನು ಬಿತ್ತಿ

ಹೊಂಗೆಯ ನೆರಳಲಿ ಗೋಲಿಯ ಆಡುತ ಕಾಲಕಳೆವ ಬನ್ನಿ
ಹುಣಿಸೆಯ ಕೊಂಬೆಗೆ ಹಗ್ಗವ ಕಟ್ಟಿ ಜೋಕಾಲೆಯಾಡುವ ಬನ್ನಿ

ಮೂಡಣ ಬಾನಲಿ ಸೂರ್ಯನ ಜೊತೆಗೆ ಮೇಲೇರುವ ಬನ್ನಿ
ತುಂಬಿದ ಕೆರೆಗೆ ಕಲ್ಲನು ಎಸೆಯುತ ಮುಸ್ಸಂಜೆ ಸವಿಯ ಬನ್ನಿ

ಚಂದಿರನಿಲ್ಲದ ಬಾನಂಗಳದಲ್ಲಿ ತಾರೆಗಳೆಣಿಸುವ ಬನ್ನಿ
ತಿಂಗಳ ಬೆಳಕಲಿ ಕೈತುತ್ತನು ತಿನ್ನುತ ಹರಟೆ ಹೊಡೆವ ಬನ್ನಿ

ತೋಟಕೆ ನುಗ್ಗಿ ಬಾವಿಗೆ ಧುಮುಕಿ ಈಜು ಕಲಿವ ಬನ್ನಿ
ಮಾವಿನ ಮರಕೆ ಕಲ್ಲನು ಹೊಡೆದು ಹಣ್ಣ ಕೆಡವ ಬನ್ನಿ

ಮನದ ನೆನಪುಗಳು ಮಾಸುವ ಮುನ್ನ
ದೇಹದ ಶಕ್ತಿ ಕುಂದುವ ಮುನ್ನ ಒಮ್ಮೆ ಮರಳಿ ಬನ್ನಿ

~ ಮಾಪ್ರಶಾಂತ

5 comments:

bhadra said...

ಹಳೆಯದಾದರೂ ಹೊಚ್ಚ ಹೊಸದಂತಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ಭೂತಕಾಲದೊಂದಿಗೆ ಸೇರಿಹೋಗುತ್ತೇವೆ. ನೀನೆನಪಿಸದಿದ್ದರೆ ಗೋಲಿ, ಚಿಣ್ಣಿದಾಂಡು, ಮರಕೋತಿ ಇತ್ಯಾದಿ ಆಟಗಳನ್ನೆಲ್ಲಾ ನೆನಪಿಸಿ ಮಂಗನನ್ನಾಗಿ ಮಾಡಿದ್ರಿ. ಕೆಏ ನಲ್ಲಿ ಈ ಹಿಂದೆ ಓದಿದ್ರೂ ಅದೆಲ್ಲಾ ಮರೆತು ಹೋಗಿತ್ತು.

ಸಮಯವಾದಾಗಲೆಲ್ಲಾ ಬರೆದು ಒಂದು ಕಡೆ ಇರಿಸಿರಿ. ಹೀಗೆ ತರಾತುರಿ ಜೀವನವಿದ್ದಾಗ ಪೋಸ್ಟಿಸಬಹುದು ಮತ್ತು ಅವನ್ನು ಓದಿ ಮನಮುದಗೊಳಿಸಿಕೊಳ್ಳಬಹುದು.

Satish said...

ಪ್ರಶಾಂತ್‌,

ಸಮಯವಿಲ್ಲದಿದ್ದರೂ ಅಷ್ಟಿಷ್ಟು ಬರೆಯುತ್ತಿರಿ, ಸುಮ್ಮನೇ ಬಹಳಷ್ಟು ಬ್ಯಾಕ್‌ಲಾಗನ್ನು ಉಳಿಸಿಕೊಳ್ಳಬೇಡಿ, ತಲೆ ಸಿಡಿದುಹೋದೀತು!

ನೀವೇ ಬರೆದಂತೆ -
"ಮನದ ನೆನಪುಗಳು ಮಾಸುವ ಮುನ್ನ
ದೇಹದ ಶಕ್ತಿ ಕುಂದುವ ಮುನ್ನ ಒಮ್ಮೆ ಮರಳಿ ಬನ್ನಿ"

ಮರಳಿ ಬರುವ ನೆನಪುಗಳಿಗೆ ನಿರಾಶೆ ಮಾಡೋದಿಲ್ಲ ತಾನೆ?

Satish said...

ಪ್ರಶಾಂತ್‌,

ಸಮಯವಿಲ್ಲದಿದ್ದರೂ ಅಷ್ಟಿಷ್ಟು ಬರೆಯುತ್ತಿರಿ, ಸುಮ್ಮನೇ ಬಹಳಷ್ಟು ಬ್ಯಾಕ್‌ಲಾಗನ್ನು ಉಳಿಸಿಕೊಳ್ಳಬೇಡಿ, ತಲೆ ಸಿಡಿದುಹೋದೀತು!

ನೀವೇ ಬರೆದಂತೆ -
"ಮನದ ನೆನಪುಗಳು ಮಾಸುವ ಮುನ್ನ
ದೇಹದ ಶಕ್ತಿ ಕುಂದುವ ಮುನ್ನ ಒಮ್ಮೆ ಮರಳಿ ಬನ್ನಿ"

ಮರಳಿ ಬರುವ ನೆನಪುಗಳಿಗೆ ನಿರಾಶೆ ಮಾಡೋದಿಲ್ಲ ತಾನೆ?

Anonymous said...

good one Prashant ....nice to see your blogs ....sisya ur simplly talented maga...manege ba voditeeni ..:))

Madhu said...

ಇದು ಹುಡುಕು ನೋಡಿ
http://www.yanthram.com/kn/